Gurugraha Sanchara

ಜ್ಯೋತಿಷಶಾಸ್ತ್ರ ಪ್ರಕಾರ ಬೃಹಸ್ಪತಿ (ಗುರ) ಗ್ರಹವು ಜೀವನಿಗೆ ಕಾರಕನಾಗದ್ದಾನೆ. ಆದ್ದರಿಂದ ವ್ಯಕ್ತಿಯ ಜೀವನದಲ್ಲಿ ವಿಶೇಷ ಅನುಭವ ಸಂತರಿಸಿಕೊಂಡಿದೆ. ಗುರು ಗ್ರಹವು ಪುಣ್ಯ ಮತ್ತು ಪುಣ್ಯಫಲಕ್ಕೆ ಸೂಚಕ. ಮನುಷ್ಯನು ಮಾಡಿದ ಪ್ರಾಚೀನ ಪುಣ್ಯವನ್ನು ಗುರುಗ್ರಹದ ಆಧಾರವಾಗಿ ತಿಳಿಯುವ ವ್ಯವಸ್ಥೆಮಾಡಿದ್ದಾನೆ ಭಗವಂತ. ಯಾವ ಸಮಯದಲ್ಲಿ ಪುಣ್ಯವು ಫಲವನ್ನು ಕೊಡುವುದು ಎನ್ನುವ ವಿಷಯವು ಗುರುಗ್ರಹದ ಸಂಚಾರದ ಮೇಲೆ ಆಧಾರಪಟ್ಟಿರುತ್ತದೆ. ಗ್ರಹಸಂಚಾರಕಾಲದಲ್ಲಿ ಗುರುಗ್ರಹವು ಶುಭಸ್ಥಾನದಲ್ಲಿದ್ದರೇ ಪುಣ್ಯಾನುಭವಕ್ಕೆ ಬರುವುದು ಅಂತ ತಿಳಿಯಬೇಕು. ಇದನ್ನೆ “ಗುರುಬಲ” ಎನ್ನುತ್ತಾರೆ. ಪುಣ್ಯಫಲದಿಂದ ಶುಭಕಾರ್ಯಗಳು ಹಾಗು ಧರ್ಮಕ್ಕೆ ವೊಳಪಟ್ಟ ಲೌಖಿಕ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತದೆ.

ಈ  ವರ್ಷ ಶ್ರಾವಣ ಶುಕ್ಲ ಅಷ್ಟಮಿ, ವಿಶಾಖ ನಕ್ಷತ್ರ, ಗರುವಾರ (11-Aug-2016), ಕನ್ಯಾರಾಶಿಯಲ್ಲಿ  ಪ್ರವೇಶಮಾಡಲಿದೆ. ಗುರುಗ್ರಹ ಸಂಚಾರಾನಂತರ ಈ ಕೆಳಗಿನ ರಾಶಿಗಳಲ್ಲಿ ಹುಟ್ಟಿದವರಿಗೆ ಶುಭಫಲವು ವುಂಟಾಗುವುದು.

  1. ಜನ್ಮರಾಶಿಯಿಂದ ಪಂಚಮ ರಾಶಿಗೆ ಗುರುಸಂಚಾರವಾಗುವುದರಿಂದ ವೃಷಭರಾಶಿಯವರಿಗೆ.     
  2. ಜನ್ಮರಾಶಿಯಿಂದ ದ್ವಿತೀಯ ರಾಶಿಗೆ ಗುರುಸಂಚಾರವಾಗುವುದರಿಂದ ಸಿಂಹರಾಶಿಯವರಿಗೆ    .  
  3. ಜನ್ಮರಾಶಿಯಿಂದ ಏಕಾದಶ ರಾಶಿಗೆ ಗುರುಸಂಚಾರವಾಗುವುದರಿಂದ ವೃಶ್ಚಿಕರಾಶಿಯವರಿಗೆ.    
  4. ಜನ್ಮರಾಶಿಯಿಂದ ನವಮ ರಾಶಿಗೆ ಗುರುಸಂಚಾರವಾಗುವುದರಿಂದ ಮಕರರಾಶಿಯವರಿಗೆ   .   
  5. ಜನ್ಮರಾಶಿಯಿಂದ ಸಪ್ತಮ ರಾಶಿಗೆ ಗುರುಸಂಚಾರವಾಗುವುದರಿಂದ ಮೀನರಾಶಿಯವರಿಗೆ.      

ಮನುಷ್ಯನು ಹುಟ್ಟುವಾಗ ಚಂದ್ರ ಗ್ರಹವು ಯಾವ ರಾಶಿಯಲ್ಲಿರುತ್ತಾನೋ ಅದು ಜನ್ಮರಾಶಿಯಾಗುತ್ತದೆ. ಇಲ್ಲಿ ಒಂದು ಸೂಕ್ಷವನ್ನು ಗ್ರಹಿಸಬೇಕು. ನಮಗಿರುವ ರಾಶಿಗಳು 12. ಯಾರು ಹುಟ್ಟಿದರೂ ಈ 12 ರಾಶಿಗಳಲ್ಲೆ ಯಾವುದಾದರು ಒಂದು ಜನ್ಮರಾಶಿ ಆಗುತ್ತದೆ. ಅಂದರೇ ಒಂದೇ ರಾಶಿಯಿರುವವರು ಬಹಳಾ ಜನವಿರುತ್ತಾರೆ. ಹಾಗಾದರೇ ಎಲ್ಲರಿಗೂ ಗುರುಬಲ ವೊಂದೇತರವಿರುತ್ತದಾ? ಅಥವಾ ಗುರುಬಲದ ಪ್ರಭಾವ ಒಂದೇರಾಶಿಯಲ್ಲಿರುವ ಇಬ್ಬರಿಗೆ ಏಕೆ ಬಿನ್ನವಾಗಿ ಫಲಾನುಭವವಾಗುತ್ತದೆ? ಗುರುಬಲ ಬಂದರೂ ಸಂಕಲ್ಪಗಳು ಈಡೇರದೇ ಇರುವುದಕ್ಕೆ ಕಾರಣವೇನು?

ಮನುಷ್ಯನ ಸಮಸ್ಯೆಗಳಿಗೆ ಮೂಲಕಾರಣ ಅವನ ಪ್ರಾಚೀನ ಕರ್ಮಗಳು. ಪ್ರತಿಯೊಬ್ಬ ಮನುಷ್ಯನು ತಾನು ತಾಳಿದ ಅನೇಕ ಜನ್ಮಗಳಲ್ಲಿ ಮಾಡಿದ ಶುಭ-ಪಾಪ ಕರ್ಮಗಳ ಪ್ರಮಾಣ ಆಧಾರವಾಗಿ ಸುಖ-ದುಃಖಗಳು ಉಂಟಾಗುತ್ತವೆ. ಮನುಷ್ಯನ ಜನ್ಮಾಂತರದಲ್ಲಿ ಮತ್ತು ಕಾಲಾಂತರದಲ್ಲಿ ಮಾಡಿದ ಪಾಪಕಾರ್ಯಗಳು ದೋಷಗಳಾಗಿ ಜಾತಕದಲ್ಲಿ ತಿಳಿಯಬರುತ್ತದೆ. ಬೃಹಜ್ಜಾತಕದಲ್ಲಿ ವರಾಹಮಿರಾಚಾರ್ಯರು ಹೀಗೆ ಹೇಳಿದ್ದಾರೆ.

ಕರ್ಮಾರ್ಜಿತಂ ಪೂರ್ವಭವೇ ಸದಾದಿ ಯತ್ತಸ್ಯ ಪಕ್ತಿಂ ಸಮಭಿವ್ಯನಕ್ತಿ

 

ಅಂದರೇ “ಮನುಷ್ಯನು ಮಾಡಿದ ಶುಭ-ಪಾಪ-ಮಿಶ್ರಮವಾದ ಕರ್ಮಗಳ ಫಲವನ್ನು, ಅನುಭವಯೋಗ್ಯಕಾಲವನ್ನು (ಅನುಭವಿಸಬೇಕಾದಕಾಲವನ್ನು) ಗ್ರಹಗಳಮೂಲಕ ತಿಳಿಯಬಹುದು”.  ಮನುಷ್ಯನು ತಾನು ಮಾಡಿದ ಶುಭ-ಪಾಪ ಕರ್ಮಗಳ ತಿಳಿಯುವುದಕ್ಕೆ, ಪ್ರಾಯಶ್ಚಿತ್ಯಾದಿಗಳನ್ನು ಮಾಡುವುದಕ್ಕೆ, ಅನಕೂಲ-ಪ್ರತಿಕೂಲ ಕಾಲಗಳನ್ನು ತಿಳಿಯುವುದಕ್ಕೆ, ಮೋಕ್ಷಗಮನವನ್ನು ಅರಿಯಲಿಕ್ಕೆ ಭಗವಂತ ತೋರಿಸಿದ ಮಾರ್ಗ ಜ್ಯೋತಿಷಶಾಸ್ತ್ರ. ಗ್ರಹಗಳ ಮೂಲಕ ಮನುಷ್ಯನು ತಾನು ಮಾಡಿದ ಶುಭ-ಪಾಪ ಕರ್ಮಗಳನ್ನು ಅದರ ತೀವ್ರತೆ, ಪರಿಣಾಮಗಳನ್ನು ಜಾತಕದಿಂದ ತಿಳಿಯಬಹುದು.

ಜಾತಕ ಕೇವಲ ಮನುಷ್ಯನು ಬಯಸುವ ಲೌಖಿಕಸುಖ-ಸಂಪತ್ತನು ಕೊಡುವ ಚಕ್ರವಲ್ಲ. ಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ವರ್ಷಕ್ಕೊಂದುಬಾರಿ ಪರೀಕ್ಷಮಾಡಿ (Exam) ಅವರ ಪ್ರತಿಭೆಗೆ ಚಿಹ್ನವಾಗಿ ಪ್ರತಿಭಾಪತ್ರವನ್ನು ನೀಡುತ್ತಾರೆ (Progress Report). ಈ  Progress Report ಆಧಾರವಾಗಿ ಉನ್ನತವಿದ್ಯೆ, ಉದ್ಯೋಗಾವಕಾಶಗಳು ಬರುತ್ತವೆ. ಜೀವನನಿರ್ವಹಣಕ್ಕೆ ಬೇಕಾದ ಧನಸಂಪಾದನೆ ಮಾಡುವುದು ಸುಲಭತರವಾಗುತ್ತದೆ. ಅಥವಾ Progress Report ನಲ್ಲಿ ಕಡಿಮೆ ಪ್ರತಿಭೆಯನ್ನು ತೋರಿಸಿದ ವಿದ್ಯಾರ್ಥಿ ಉನ್ನತ ವಿದ್ಯಾಭ್ಯಾಸವನ್ನು ಮಾಡುವುದಕ್ಕೆ ಅವಕಾಶಸಿಗದೇ, ಒಳ್ಳೆಯ ಉದ್ಯೋಗವನ್ನು ಹೊಂದದೇ, ಜೀವನ ನಿರ್ವಹಣೆಗೆ ಬೇಕಾದ ಧನವನ್ನು ಸಂಪಾದಿಸುವುದು ಬಹಳ ಕಷ್ಟತರವಾಗುತ್ತದೆ. ಅದೇರೀತಿಯಲ್ಲಿ ಮನುಷ್ಯನು ಜನ್ಮಾಂತರದಲ್ಲಿ, ಕಾಲಾಂತರದಲ್ಲಿ ಮಾಡಿದ ಶುಭ-ಅಶುಭ ಕರ್ಮಗಳನ್ನು, ಪುಣ್ಯ-ಪಾಪ ಸಂಭಂದಗಳನ್ನು ಜಾತಕವೆಂಬುವ ಪ್ರತಿಭಾ ಪತ್ರವನ್ನು (Birth Progress Report) ಜನ್ಮತಾಳುವಾಗ ಪಡೆಯುತ್ತಾನೆ.

ಗುರುಬಲ ಬಂದಿದೆ ಯೆಂದರೆ ಹಿಂದಿನ ಜನ್ಮಗಳಲ್ಲಿ ಮಾಡಿದ ಪುಣ್ಯಕ್ಕೆ ತಕ್ಕಂತೆ ಫಲವನ್ನು ಅನುಭವಿಸಬೇಕಾದ ಸಮಯವು ಆಸನ್ನವಾಗಿದೆ ಅಂತ ಅರ್ಥ. ಇಲ್ಲಿ ಮುಖ್ಯವಾಗಿ ಹಿಂದಿನ ಜನ್ಮಗಳಲ್ಲಿ ಪುಣ್ಯ ಎಷ್ಟು ಮಾಡಿದ್ದಾನೋ, ಪುಣ್ಯದ ಪ್ರಮಾಣ ಎಷ್ಟುಮಟ್ಟಿಗೆ ಇದೆ ಎನ್ನುವದರಮೇಲೆ ಗುರುಬಲ ಅನುಕೂಲತೆ ಆಧಾರಪಟ್ಟಿರುತ್ತದೆ. ಪೂರ್ವ ಪುಣ್ಯ ಕಡಿಮೆ ಇದ್ದಲ್ಲಿ ಗುರುಬಲ ಬಂದರೂ ಅನುಕೂಲತೆ ಕಡಿಮೆ ಇರುತ್ತದೆ. ಅಂದರೇ ಗುರುಬಲ ಬಂದಾಗ ಉತ್ತಮವಾದ ಫಲವನ್ನು ಪಡಿಯಬೇಕಾದರೇ ಮೊದಲು ಉತ್ತಮವಾದ ಪುಣ್ಯವು ಮಾಡಿರಬೇಕ್ಕಲ್ಲವೇ. ನಮಗೆ ಬೈಂಕ್ ನಲ್ಲಿ ಎಷ್ಟು ಹಣವಿರುತ್ತದೋ ಅದರಮೇಲೆ ನಮಗೆ ಬಡ್ಡಿಯು ಬರುತ್ತದೆ. ಇಲ್ಲಿಯೂ ಅದೇರೀತಿ. ಹಾಗಾಗಿ ಗುರುಬಲ ಬಂದರೂ ಮನುಷ್ಯ-ಮನುಷ್ಯರಲ್ಲಿ ಫಲದ ವ್ಯತ್ಯಾಸವಿರುತ್ತದೆ.

ಇಲ್ಲಿ ಗುರುಬಲವನ್ನು ನೋಡುವಾಗ ಕೇವಲ ರಾಶಿಯಿಂದ ಮಾತ್ರ ನೋಡುವುದಲ್ಲದೇ ಜಾತಕವನ್ನು ಕೂಡಾ ಅಧ್ಯಯನ ಮಾಡಬೇಕು. ವ್ಯಕ್ತಿಯ ಜಾತಕದಲ್ಲಿ ಗುರುವು ಇರುವ ಸ್ಥಾನ, ಅವಸ್ಥೆಗಳಿಂದ ಹಿಂದಿನ ಪುಣ್ಯ ವಿಚಾರ ಅರಿಯಬಹುದು. ಜಾತಕದಲ್ಲಿ ಗುರುಗ್ರಹ ಬಲವಾಗಿದ್ದರೇ ಮಾತ್ರ ಗುರುಬಲ ಬಂದಾಗ ಅನುಕೂಲವಾಗಬಹುದು. ಜಾತಕದಲ್ಲಿ ಗುರುಗ್ರಹ ದುರ್ಬಲನಾಗಿದ್ದರೇ, ಪಾಪಗತನಾಗಿದ್ದರೇ ಎಷ್ಟುಬಾರಿ ಗುರುಬಲ ಬಂದರೂ ಅನುಕೂಲ ಫಲವು ಅನುಭವಕ್ಕೆ ಬರುವುದಿಲ್ಲ.

ಜಾತಕದಲ್ಲಿ ಗುರುಗ್ರಹವು ಬಲವಾಗಿರಬೇಕಾದರೆ ಸದಾಚಾರ-ಸತ್ಕರ್ಮಗಳನ್ನು ಆಚರಿಸುತ್ತಾ, ಎಲ್ಲರ ಹಿತವನ್ನು ಬಯಸುತ್ತಾ, ವರ್ಣಾಶ್ರಮಧರ್ಮಕ್ಕೆ ಅನುಗುಣವಾಗಿ ನಡೆಯುತ್ತಾ, ತಾಯಿ-ತಂದೆ-ಗುರು-ಹಿರಿಯರನ್ನ ಗೌರವಿಸುತ್ತಾ, ತನಗೆ ನಿರ್ದೇಶಿಸಿರುವ ಕರ್ತವ್ಯಗಳನ್ನು ಸಕಾಲದಲ್ಲಿ ಆಚರಿಸುತ್ತಾ,  ಭಗವಂತನನ್ನು ನಿತ್ಯವೂ ಆರಾಧಿಸುತ್ತಾ ಇರುವ ಮನುಷ್ಯ ಎಷ್ಟುಬಾರಿ ಭೂಮಿಯಲ್ಲಿ ಜನ್ಮತಾಳಿದರೂ ಜಾತಕದಲ್ಲಿ ಗುರುಗ್ರಹ ಶುಭಸ್ಥಾನದಲ್ಲಿದ್ದು ಅನುಕೂಲ ಫಲವನ್ನು ಕೊಡುವುದು. ಇದಕ್ಕೆ ವಿಪರೀತವಾಗಿ ಜೀವನದಲ್ಲಿ ಸದಾಚಾರ ಇಲ್ಲದೇ ದುಷ್ಕರ್ಮಗಳನ್ನು ಆಚರಿಸುತ್ತಾ, ಅನಗತ್ಯವಾದ ಧನವನ್ನು ಸಂಪಾದಿಸುತ್ತಾ, ಸ್ವಂತಹಿತಕ್ಕೇ ಹೆಚ್ಚು ಪ್ರಾಧಾನ್ಯತೆಯನ್ನು ಕೊಡುತ್ತಾ, ಜನರನ್ನು ಪೀಡಿಸುತ್ತಾ, ಗುರುಹಿರಿಯರನ್ನು ದ್ವೇಷಿಸುತ್ತಾ, ಶಾಸ್ತ್ರಗಳನ್ನು, ಭಗವಂತನನ್ನು ನಿಂದಿಸುತ್ತಿರುವ ಮನುಷ್ಯನು ಎಷ್ಟುಬಾರಿ ಹುಟ್ಟಿದರೂ ಜಾತಕದಲ್ಲಿರುವ ಗ್ರಹಗಳು ಅಶುಭವಿಷಯಗಳನ್ನು ಸೂಚಿಸುತ್ತವೆ. ತತ್ಪಲವಾಗಿ ಈಗಿನ ಜನ್ಮದಲ್ಲಿ ದೋಷಗಳಾಗಿ ವ್ಯವಹರಿಸುತ್ತಾ ಕಷ್ಟ-ನಷ್ಟಗಳಿಗೆ ಕಾರಣವಾಗುತ್ತದೆ. ಇಂತವರಿಗೆ ಎಷ್ಟುಬಾರಿ ಗುರುಬಲ ಬಂದರೂ ಅನುಕೂಲ ಫಲ ಅನುಭವಕ್ಕೆ ಬರುವುದಿಲ್ಲ ಅಂತ ಗ್ರಹಿಸಬೇಕು.

ಕೊನೆಯದಾಗಿ ಗುರುಬಲ ವಿಲ್ಲದಿದ್ದವರ ಕರ್ತವ್ಯವೇನು. ಪುಣ್ಯದ ರಾಶಿ ಕಡಿಮೆ ಇದ್ದರೂ ಅಥವಾ ಪುಣ್ಯಾನುಭವಕಾಲ ಬರದಿದ್ದರೂ ಅನುಕೂಲಫಲಕ್ಕೆ ಒಂದು ಮಾರ್ಗವಿದೆ. ಅದು ಏನೆಂದರೇ ಪುಣ್ಯ ಯಾರ ಹತ್ತರ ಇರುತ್ತೋ ಅದು ಪಡೆಯುವುದು ಮಾತ್ರ. ಗುರುಗಳ ಹತ್ತರ ಅಪಾರವಾದ ಪುಣ್ಯದ ರಾಶಿ ಯಿರುತ್ತದೆ. ಹಾಗಾಗಿ ಗುರುಗಳನ್ನು ಭಕ್ತಿಶ್ರದ್ದೆಗಳಿಂದ ಬೇಡಿಕೊಳ್ಳುತ್ತ ಸದಾಚಾರದೊಳಗೆ ತೊಡಗಿದವರಿಗೆ ಗುರುಗಳು ತಮ್ಮ ಪುಣ್ಯರಾಶಿಯನ್ನು ಹಂಚಿಕೊಂಡು ಸಮಸ್ಯೆಗಳಿಂದ ಕಾಪಾಡುತ್ತಾರೆ. ಹಾಗಾಗಿ ಜ್ಞಾನವನ್ನು ಕೊಡುವುದರಲ್ಲಿ ಮತ್ತು ಸಮಸ್ಯೆಗಳನ್ನು ದೂರಮಾಡುವುದರಲ್ಲಿ ಗುರುಗಳಿಗಿಂತ ಮಾರ್ಗದರ್ಶಕರು ಬೇರೆ ಯಾರು ಇಲ್ಲ. ಹಾಗಾಗಿ ಕಲಿಯುಗದಲ್ಲಿ ನಮ್ಮ ಉದ್ದಾರಕ್ಕಾಗಿ ಭಗವಂತ ಕಳುಹಿಸಿಕೊಟ್ಟ ಮಾರ್ಗ ದರ್ಶಿಯೇ ಗುರುವು. ನಾವೆಲ್ಲರು ಗುರುಗಳ ಅನುಗ್ರಹಕ್ಕೆಪಾತ್ರರಾಗುತ್ತಾ ಜೀವನವನ್ನು ಸದಾಚಾರದಲ್ಲಿ ನಡಿಸೋಣ.

 

ಗುರುವಿನ ಗುಲಾಮನಾಗುವತನಕಾ ದೊರಯದಣ್ಣ  ಮುಕುತಿ……..

|| ಶ್ರೀಕೃಷ್ಣಾರ್ಪಣ ಮಸ್ತು ||

madhwamrutha

Tenets of Madhwa Shastra

Leave a Reply

Your email address will not be published. Required fields are marked *